Photogallery
NEW TEAM 2024-2025
PFA ತುಳನಾಡ ಪೋಲ್ – ಪ್ರಥಮ ಸ್ಥಾನ ಗಳಿಸಿರುವ ನಮ್ಮ ಮಹಿಳೆಯರು
Prathibha Puraskara Mangalore List.
Prathibha Puraskara Kasaragod List.
PFA Kk Rao program
ಆರ್ಯ ಯಾನೆ ಮರಾಠ ಸಮಾಜ ಸಂಘ (ರಿ) ಮಂಗಳೂರು – ಕಾಸರಗೋಡು ಇದರ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಅಮೃತ ಭಾರತಿಗೆ ಸಮುದಾಯದಾರತಿ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದರ ಅಂಗವಾಗಿ 1971ರ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ನಮ್ಮ ಸಮುದಾಯದವರಾದ ಮೇಜರ್ ಕೆ. ಕೆ. ರಾವ್ (ಕಲ್ಯಾಣಪುರ ಕೃಷ್ಣೋಜಿ ರಾವ್ ಮೋರೆ)ರವರಿಗೆ ಪ್ರಧಾನ ಮಂತ್ರಿಗಳ ಹಸ್ತಾಕ್ಷರವಿರುವ ಸ್ಮರಣಿಕೆ ಲಭಿಸಿದ ಹಿನ್ನೆಲೆಯಲ್ಲಿ ಗೌರವ ಸಂಸ್ಮರಣೆ ಕಾರ್ಯಕ್ರಮವು ದಿನಾಂಕ 07/08/2022 ನೇ ಆದಿತ್ಯವಾರ ಮಧ್ಯಾಹ್ನ 2.30ರಿಂದ ಆರ್ಯ ಮರಾಠ ಭವನದಲ್ಲಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಮೇಜರ್ ಕೆ. ಕೆ. ರಾವ್ ರವರಿಗೆ ನುಡಿ ನಮನ, ಪುಷ್ಪಾರ್ಚನೆ, ಗೀತಾ ನಮನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಭಾರತೀಯ ಸೇನೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ, ನಿವೃತ್ತ ರಾಗಿರುವ ಹಾಗೂ ಮೃತ ಪಟ್ಟ ಸಮಾಜದ ಯೋಧರುಗಳಿಗೆ ಗೌರವಾಭಿನಂದನೆ ನಡೆಸಲಾಯಿತು.
ಕಾರ್ಯಕ್ರಮ ದಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಪ್ರಸ್ತುತ ಸೇವೆಯಲ್ಲಿರುವ ಹಾಗೂ ನಿವೃತ್ತರಾಗಿರುವ ಪೊಲೀಸರು ಹಾಗೂ ಸಮಾಜ ಬಂಧುಗಳು ಉಪಸ್ಥಿತರಿದ್ದರು.
ಮೇಜರ್ ಕೆ. ಕೆ. ರಾವ್ ರವರಿಗೆ ಭಾರತ ಸರಕಾರ ನೀಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಹಸ್ತಾಕ್ಷರ ಇರುವ ಸ್ಮರಣಿಕೆ ಹಾಗೂ ಯೋಧರಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಜರಗಲಾಯಿತು.